Guide Me

ಬೆಂಗಳೂರು ಒನ್ ಸಮಗ್ರ ನಾಗರಿಕ ಸೇವೆಗಳ ಯೋಜನೆ

ಬೆಂಗಳೂರು ಒನ್ ಯೋಜನೆಯ ಅನ್ವೇಷಣೆ

ಬೆಂಗಳೂರು ಒನ್ ಯೋಜನೆಯ ಪರಿಚಯ

ಬೆಂಗಳೂರು ಒನ್ ಯೋಜನೆಯು ಸಮಗ್ರ ನಾಗರಿಕ ಸೇವೆಗಳನ್ನು ಒದಗಿಸುವ ಯೋಜನೆಯಾಗಿದ್ದು, ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಬೆಂಗಳೂರು ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳ ಮೂಲಕ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಬೆಂಗಳೂರು ಒನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಬೆಂಗಳೂರು ಒನ್ ಸೇವೆಗಳನ್ನು ಕೇಂದ್ರಗಳ ಜೊತೆಗೆ, ಕರ್ನಾಟಕಒನ್ ವೆಬ್ಸೈಟ್ (www.karnatakaone.gov.in) ಮೂಲಕ ಕೂಡ ಆನ್ಲೈನ್ ಸೇವೆಗಳನ್ನು ಒದಗಿಸಲಾಗುತ್ತಿದೆ.