Guide Me

ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವೆಗಳ ಯೋಜನೆ

ಕರ್ನಾಟಕ ಒನ್ ಯೋಜನೆಯ ಅನ್ವೇಷಣೆ

ಕರ್ನಾಟಕ ಒನ್ ಯೋಜನೆಯ ಪರಿಚಯ

ಬೆಂಗಳೂರು ಒನ್ ಯೋಜನೆಯ ಯಶಸ್ಸನ್ನು ಮನಗಂಡು ಬೆಂಗಳೂರು ಒನ್ ಮಾದರಿಯಲ್ಲಿಯೇ ರಾಜ್ಯದ ಉಳಿದ ನಗರಗಳಲ್ಲಿ ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಕರ್ನಾಟಕ ಒನ್ ಯೋಜನೆಯನ್ನು ಕೈಗೆತ್ತಿಗೊಂಡಿತು. ಕರ್ನಾಟಕಒನ್ ಯೋಜನೆಯನ್ನು ಈಗಾಗಲೇ 14 ನಗರಗಳಾದ ಶಿವಮೊಗ್ಗ, ಮೈಸೂರು, ಗುಲ್ಬರ್ಗಾ, ತುಮಕೂರು, ಮಂಗಳೂರು, ಬಳ್ಳಾರಿ, ದಾವಣಗೆರೆ, ಗದಗ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಕಾರವಾರ, ಉಡುಪಿ, ವಿಜಯಪುರ ಮತ್ತು ಬೆಳಗಾವಿಯಲ್ಲಿ, ಸಮಗ್ರ ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಒನ್ ಸೇವೆಗಳನ್ನು ಕೇಂದ್ರಗಳ ಜೊತೆಗೆ, ಕರ್ನಾಟಕಒನ್ ವೆಬ್ಸೈಟ್ (www.karnatakaone.gov.in) ಮೂಲಕ ಕೂಡ ಆನ್ಲೈನ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಬೆಂಗಳೂರು ನಗರವನ್ನು ಹೊರತು ಪಡಿಸಿ ಕರ್ನಾಟಕ ರಾಜ್ಯದ ಉಳಿದ ನಗರಗಳಲ್ಲಿ ಸ್ಥಾಪಿಸಿರುವ ಕೇಂದ್ರಗಳನ್ನು ”ಕರ್ನಾಟಕ ಒನ್ “ಎಂದು ಹೆಸರಿಸಲಾಗಿದೆ.