ಕರ್ನಾಟಕಒನ್ ಯೋಜನೆಯ ವೈಶಿಷ್ಟ್ಯತೆಗಳು
- ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ನೀಡಲಾಗುತ್ತಿದೆ.
- ಸೇವೆಗಳನ್ನು ಬೆಳಿಗ್ಗೆ 08 ರಿಂದ ಸಂಜೆ 07.00 ರವರೆಗೆ ವರ್ಷದ ಎಲ್ಲಾ ದಿನಗಳು ನೀಡಲಾಗುತ್ತದೆ (ಕಾರ್ಮಿಕರ ದಿನಾಚರಣೆ, ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಚುನಾವಣೆ ಮತ ಚಲಾಯಿಸುವ ದಿನ, ಗಾಂಧಿ ಜಯಂತಿ, ಮತ್ತು ಕನ್ನಡ ರಾಜ್ಯೋತ್ಸವ ಹೊರತುಪಡಿಸಿ).
- ಯಾವುದೇ ಕೇಂದ್ರದ ಯಾವುದೇ ಕೌಂಟರ್ಗಳಲ್ಲಿ ಎಲ್ಲಾ ಸೇವೆಗಳನ್ನು ನಾಗರಿಕರು ಪಡೆಯಬಹದು.
- ನಾಗರಿಕರು ನಗದು/ಚೆಕ್/ಡಿಡಿ/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದಾಗಿದೆ.
- ಕರ್ನಾಟಕಒನ್ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳನ್ನು ಸೇವಾವಾರು ನಿಗಧಿತ ಅವಧಿಯೊಳಗೆ ವಿತರಿಸಬೇಕೆಂದು ಕಡ್ಡಾಯಗೊಳಿಸಿರುವುದರಿಂದ ನಾಗರಿಕರು ಸರದಿ ಸಾಲುಗಳಲ್ಲಿ ವ್ಯಯಿಸುವ ವೇಳೆಯನ್ನು ಉಳಿಸಬಹುದಾಗಿದೆ.
- ನಾಗರಿಕ ಸ್ನೇಹಿ ಕೇಂದ್ರಗಳು: ಸಮಗ್ರ ನಾಗರಿಕ ಕೇಂದ್ರಗಳು ಹವಾ ನಿಯಂತ್ರಿತ ಕೇಂದ್ರಗಳಾಗಿದ್ದು ಕುಡಿಯುವ ನೀರು, ಟೆಲಿವಿಷನ್, ದಿನಪತ್ರಿಕೆಗಳು ಇತ್ಯಾದಿಗಳ ಸೌಲಭ್ಯಗಳನ್ನು ಹೊಂದಿರುತ್ತವೆ.
- ನಾಗರಿಕರು ಕೇಂದ್ರಗಳಲ್ಲಿ ವ್ಯಯಿಸಬಹುದಾದ ವೇಳೆಯ ನಿಯಂತ್ರಣಕ್ಕಾಗಿ ವಿದ್ಯುನ್ಮಾನ ಸಾಲು ನಿರ್ವಾಹಣಾ ಪದ್ಧತಿಯನ್ನು ಅಳವಡಿಸಲಾಗಿದೆ.
- ಕೇಂದ್ರಗಳಲ್ಲಿ ಲಭ್ಯವಿರುವ ಕೆಲವೇ ಸೇವೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಸೇವೆಗೆ ನಾಗರಿಕರು ಸೇವಾ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ.
- ಕರ್ನಾಟಕ ಒನ್ ವೆಬ್ಸೈಟ್ ಮೂಲಕ ಆನ್ ಲೈನ್ ಸೇವೆಗಳನ್ನು ಒದಗಿಸಲಾಗುತ್ತಿದೆ.